ಈ ಕೆಳಗಿನವುಗಳನ್ನು ಹೊಂದಿರುವ ಪ್ರಜಾಕೀಯ ಪಕ್ಷ
- 1.ಯಾವುದೇ ಪಕ್ಷದ ನಿಧಿ ಇಲ್ಲ (ನಗದುರಹಿತ ಪಕ್ಷ)
- 2. ಕಾರ್ಯಕರ್ತರು ಇಲ್ಲ
- 3. ಪ್ರಾದೇಶಿಕ ಕಚೇರಿಗಳಿಲ್ಲ
- 4. ಮೆರವಣಿಗೆ / ರ್ಯಾಲಿ / ಬ್ಯಾನರ್ಗಳು / ಒಟ್ಟುಗೂಡಿಸುವಿಕೆ ಇಲ್ಲ
- 5. ಯಾರನ್ನೂ ದೂಷಿಸುವುದಿಲ್ಲ
- 6. ಸುಳ್ಳು ಭರವಸೆಗಳಿಲ್ಲ (ಸುಳ್ಳು ಪ್ರಣಾಳಿಕೆ)
- 7. ಜನರಿಗೆ ಅನಾನುಕೂಲತೆ ಮಾಡುವ ಪ್ರತಿಭಟನೆಗಳಿರುವುದಿಲ್ಲ
- 8. ಜನರನ್ನು ಮರುಳು ಮಾಡಲು ಸಾಮಾಜಿಕ ಸೇವೆಯ ನಾಟಕವಿಲ್ಲ
ಶುದ್ಧ ರೂಪದ ಪ್ರಜಾಪ್ರಭುತ್ವದಲ್ಲಿ ನಮಗೆ ಬೇಕಿರುವುದು,
-
ಪ್ರಾಮಾಣಿಕ ಕೆಲಸಗಾರರು (ಅಭ್ಯರ್ಥಿಗಳು)… ಅವರು ಸಂಬಳಕ್ಕಾಗಿ ಕೆಲಸ ಮಾಡುತ್ತಾರೆ …
-
ಪ್ರಾಮಾಣಿಕ ಮತದಾರರು (ಪ್ರಜೆಗಳು) ... ನಿಜವಾದ ಸಿದ್ಧಾಂತಕ್ಕೆ ಮತ ಹಾಕಬೇಕು.
ನಾವು ನಂಬುತ್ತೇವೆ
ಕಲಾತ್ಮಕ ಆಡಳಿತ / ಆರ್ಟ್ ಆಫ್ ಗವರ್ನೆನ್ಸ್
A ಹೊಣೆಗಾರಿಕೆ
R ಜವಾಬ್ದಾರಿ
T ಪಾರದರ್ಶಕತೆ
ಪ್ರಜಾ ಪ್ರತಿನಿಧಿಯ ಕಾರ್ಯವೈಖರಿಯ ವಿಧಾನ
ನಾನೊಬ್ಬ ಸಾಮಾನ್ಯ ಪ್ರಜೆಯಲ್ಲ, ನನ್ನ (ನೇರ ಮತ್ತು ಪರೋಕ್ಷ ತೆರಿಗೆ) ಹಣದಿಂದಲೇ ಸರ್ಕಾರ ನಡೆಯುತ್ತಿದೆ ಎಂಬ ಅರಿವು ಇರುವ "ಅಸಾಮಾನ್ಯ ಪ್ರಜೆ" !!!.
- ನಾನು ಈ ಹೊಲಸು ಹಣ, ಜಾತಿ, ಧರ್ಮ ಕೆಸರೆರಚಾಟದ ಸುಳ್ಳು ಆಶ್ವಾಸನೆ ಪ್ರಚಾರಗಳ ವ್ಯಾಪಾರೀ ರಾಜಕೀಯದಿಂದ ಮುಕ್ತನಾಗಬೇಕು... ನನಗೆ ನಾಯಕರೂ ಬೇಡ, ಸೇವಕರೂ ಬೇಡ.. ನನಗೆ ಬರೀ ಸಂಬಳಕ್ಕೆ ಕೆಲಸ ಮಾಡುವ ಕಾರ್ಮಿಕ ಪ್ರತಿನಿಧಿ ಬೇಕು.
- ನಿರಂತರವಾಗಿ ಆ ಕಾರ್ಮಿಕ ಪ್ರತಿನಿಧಿಯು ನನ್ನ ಸಂಪರ್ಕದಲ್ಲಿರಬೇಕು ( ವೈಯಕ್ತಿಕವಾಗಿ ಅಥವಾ ತಂತ್ರಜ್ಞಾನದಿಂದ ) ನನ್ನ ಬೇಕು ಬೇಡಗಳನ್ನು ತಿಳಿದು ಅದನ್ನು ಪೂರೈಸಲು ಪಾರದರ್ಶಕವಾಗಿ ಕೆಲಸ ಮಾಡಬೇಕು.
- ಕಾಲಕಾಲಕ್ಕೆ ಸರ್ಕಾರದ ಯೋಜನೆ, ಸವಲತ್ತು ಮತ್ತು ಸೌಲಭ್ಯಗಳ ಬಗ್ಗೆ ನನಗೆ ತಿಳಿಸುತ್ತಿರಬೇಕು ಹಾಗೂ ಸರ್ಕಾರದಿಂದ ನನಗೆ ಆಗಬೇಕಾದ ಕೆಲಸಗಳಿಗೆ ನನ್ನ ಕಾರ್ಮಿಕ ಪ್ರತಿನಿಧಿ ಸಹಾಯಮಾಡಬೇಕು.
- ತಾನು ಮಾಡಿದ ಕೆಲಸಗಳ ವಿವರವನ್ನು ದ್ರಶ್ಯ ದಾಖಲೆಗಳೊಂದಿಗೆ ನನಗೆ ತಲುಪಿಸುತ್ತಿರಬೇಕು ನನಗೆ ನನ್ನ ಕಾರ್ಮಿಕ ಪ್ರತಿನಿಧಿಯ ಕೆಲಸ ಸಮಾಧಾನವಾಗಿದೆಯೋ ಇಲ್ಲವೋ ಎಂದು ( ವೈಯಕ್ತಿಕವಾಗಿ ಅಥವಾ ತಂತ್ರಜ್ಞಾನದಿಂದ ) ಪಾರದರ್ಶಕತೆಯಿಂದ ಆತನೇ ಕಾಲಕಾಲಕ್ಕೆ ತಿಳಿಯುತ್ತಿರಬೇಕು.
- ನನ್ನ ಪ್ರತಿನಿಧಿಯ ಕೆಲಸದಲ್ಲಿ ನ್ಯೂನ್ಯತೆಗಳಿದ್ದರೆ ಅದಕ್ಕೆ ಕಾರಣವೇನು ಎಂದು ಆತ ದ್ರಶ್ಯದಾಖಲೆಗಳೊಂದಗೆ ವಿವರಿಸಲು ವಿಫಲವಾದರೆ ಆತ ತನ್ನ ಕೆಲಸಕ್ಕೆ ರಾಜೀನಾಮೆ ಕೊಡಬೇಕು.
ಪ್ರಜೆಗಳೇ ಹೈಕಮಾಂಡ್
ಸೂಕ್ತ ಅಭ್ಯರ್ಥಿಯ....
ಆಯ್ಕೆ- ನಿಮ್ಮದೇ ನಿರ್ಧಾರ
ಚುನಾವಣೆ - ನಿಮ್ಮದೇ ನಿರ್ಧಾರ
ತಿದ್ದುಪಡಿ - ನಿಮ್ಮದೇ ನಿರ್ಧಾರ
ತಿರಸ್ಕಾರ - ನಿಮ್ಮದೇ ನಿರ್ಧಾರ
ಪುರಸ್ಕಾರ - ನಿಮ್ಮದೇ ನಿರ್ಧಾರ
ನೀವು ಭಾಗವಹಿಸಲು ಅತಿ ಸರಳ ಪಾರದರ್ಶಕ ವಿಧಾನವಿರುತ್ತದೆ
ಮತದಾರರ ಶಿಫಾರಸು ಪತ್ರ
ನೀವು (ಬಹುಜನರ ಬೇಡಿಕೆ ಪ್ರಕಾರ) ಬಯಸುವ ಅಭ್ಯರ್ಥಿಗೆ UPP ಪಕ್ಷ ಟಿಕೆಟ್ ನೀಡುತ್ತದೆ (Selection) (ಆಯ್ಕೆ).... ಮುಂದೆ ನಡೆಯುವ ಚುನಾವಣೆಯಲ್ಲಿ ಆ ಅಭ್ಯರ್ಥಿಯನ್ನು ನೀವೇ ಚುನಾಯಿಸುತ್ತೀರಿ (Election) (ಚುನಾವಣೆ).... (ಚುನಾವಣೆಯಲ್ಲಿ ಏನಾದರೂ ವಿಭಿನ್ನ ಫಲಿತಾಂಶದ ಗೋಲ್ಮಾಲ್ ಆದರೂ ಅದೂ ನಿಮ್ಮ ಗಮನಕ್ಕೆ ಬರುತ್ತದೆ)
ನಂತರ ಚುನಾಯಿತ ಅಭ್ಯರ್ಥಿ ನಿಮ್ಮ ಬೇಡಿಕೆಗಳ ಆಜ್ಞೆಗಳನ್ನು ಈಡೇರಿಸಲು (UPP ಪಕ್ಷದ SOP) ಪಕ್ಷದ ನಿರ್ಧಿಷ್ಟ ಕಾರ್ಯ ವೈಖರಿ ವಿಧಾನದ ಪ್ರಕಾರ ಕೆಲಸ ಮಾಡಬೇಕು.
ಆರು ತಿಂಗಳಿಗೊಮ್ಮೆ ಸರಳ ಪಾರದರ್ಶಕ ವಿಧಾನದ ರೀತಿ ಅಭ್ಯರ್ಥಿ ಹಾಗೂ ಪಕ್ಷ ನಡೆಸುವ ಜನಾಬಿಪ್ರಾಯದ ಪೋಲಿಂಗ್ನಲ್ಲಿ ಆತ / ಆಕೆಯ ಕೆಲಸದಬಗ್ಗೆ ಅಸಮಾಧಾನವಿದ್ದರೆ ನೀವೇ ಅಭ್ಯರ್ಥಿಗೆ ಒಂದು (Correction) (ತಿದ್ದುಪಡಿ) ತಿದ್ದಿಕೊಳ್ಳಲು ಅವಕಾಶ ಕೊಡಬಹುದು... ನಂತರ ನಡೆಯುವ ಪೋಲಿಂಗ್ನಲ್ಲೂ ನಿಮಗೆ ಅಭ್ಯರ್ಥಿಯ ಕೆಲಸ ಇಷ್ಟವಾಗದಿದ್ದರೆ ಅವನನ್ನು ನೀವು ತಿರಸ್ಕರಿಸಬಹುದು (Rejection) (ತಿರಸ್ಕಾರ)..... (ಇದಕ್ಕೆ ನಮ್ಮ ಸಂವಿಧಾನದಲ್ಲಿ ಅವಕಾಶ ಇಲ್ಲದಿರುವುದರಿಂದ) ಇದಕ್ಕಾಗಿ, ಪಕ್ಷದ ಅಧ್ಯಕ್ಷನಾದ ನನ್ನ ಜೊತೆ ಒಂದು ಹೋರಾಟವೇ ಮಾಡಿ ಅನರ್ಹ ಶಾಸಕನನ್ನು ತಿರಸ್ಕರಿಸುವ ಕಾನೂನು ಸಂವಿಧಾನದಲ್ಲಿ ಬರುವಂತೆಯೂ ತಾವು ಮಾಡಬಹುದು.....
ಅಭ್ಯರ್ಥಿಯ ಕೆಲಸ ತಮಗೆ ಇಷ್ಟವಾದರೆ ಪೋಲಿಂಗ್ ನಲ್ಲಿ ಆತ ಉನ್ನತ ಹುದ್ದೆ ಯಲ್ಲಿ ಕೆಲಸ ಮಾಡಲು (promotion) (ಪುರಸ್ಕಾರ) ನೀವೇ ನಿರ್ಧಾರವನ್ನೂ ಮಾಡಬಹುದು. ಈ ರೀತಿ ನಿಮ್ಮ ಕಷ್ಟಾರ್ಜಿತ ತೆರಿಗೆ ಹಣ, ನಿಮ್ಮ ನಿಮ್ಮ ಮಕ್ಕಳ ಭವಿಷ್ಯ ರೂಪಿಸುವ ಸರ್ಕಾರದ, ಆಡಳಿತದ, ಕಾನೂನಿನ ಪ್ರತಿಯೊಂದು ಪ್ರಕ್ರಿಯೆಯಲ್ಲಿಯೂ ನೀವು ಭಾಗವಹಿಸಿದಾಗ, ಮುಂದಾಳತ್ವ ವಹಿಸಿದಾಗ ಮಾತ್ರ ನಿಮ್ಮ ಉಜ್ವಲ ಭವಿಷ್ಯಕ್ಕೆ ನೀವೇ ನಾಂದಿ ಹಾಡುತ್ತೀರಿ ಮತ್ತು ನಿಜವಾದ ಸ್ವತಂತ್ರ್ಯ ಭಾರತದ ಪ್ರಜಾಪ್ರಭುತ್ವದ ಸವಿಯನ್ನು ನೀವೇ ನಾಯಕರಂತೆ ಭಾಗವಹಿಸುವುದರ ಮುಖಾಂತರ ಅದರ ಸುಖವನ್ನೂ ಅನುಭವಿಸುತ್ತೀರಿ.
ಜೈ ಪ್ರಜಾಕೀಯ,
ಉಪೇಂದ್ರ
ನಮ್ಮ ಪ್ರಣಾಳಿಕೆಗಳು
ಸುಳ್ಳು ಭರವಸೆಗಳಲ್ಲ
ನಿಮ್ಮ ಸಮಸ್ಯೆಗಳು ...
ನಿಮ್ಮ ಬೇಡಿಕೆಗಳು ...
ನಿಮ್ಮ ಕುಂದುಕೊರತೆಗಳು
ನಿಮ್ಮ ಅಭಿವೃದ್ಧಿ..

“ನಾನು ಪ್ರತಿಯೊಂದು ಚುನಾವಣೆಗಳಲ್ಲೂ ನನ್ನ ಕ್ಷೇತ್ರದಿಂದ ಪ್ರಜಾಕಾರ್ಮಿಕನಾಗಲು ಸ್ಪರ್ಧಿಸುತ್ತೇನೆ”
- ಅಭ್ಯರ್ಥಿ
“ಈ ವಿಚಾರಗಳಿಗೆ ಬದ್ದರಾಗಿ ಯಾರೇ ಚುನಾವಣೆಗೆ ನಿಂತರೂ ಅವರಿಗೆ ನನ್ನ ಮತ ನೀಡಲು ನಾನು ಸಿದ್ದನಾಗಿದ್ದೇನೆ”
- ಮತದಾರ
ಉತ್ತಮ ಪ್ರಜಾಕೀಯ ಪಕ್ಷ ಸೇರಿ(ಯುಪಿಪಿ)

ಪ್ರಜಾಕೀಯದ/ಯು.ಪಿ.ಪಿ.ಯ ಬೆಂಬಲಿಗರಾಗಿರಿ
ಭಾರತದ ಪ್ರತಿಯೊಬ್ಬರೂ ಪ್ರಜಾಕೀಯದ/ಯುಪಿಪಿಯ ಸದಸ್ಯ/ ಬೆಂಬಲಿಗರಾಗಬಹುದು. ಉತ್ತಮ ಪ್ರಜಾಕೀಯ ಪಕ್ಷವು ನಗದುರಹಿತ ಪಕ್ಷವಾಗಿದ್ದು, ಇಲ್ಲಿ ಪಕ್ಷದ ನಿಧಿಗಳಿಲ್ಲ, ಯಾವುದೇ ಸದಸ್ಯತ್ವ ಶುಲ್ಕವಿರುವುದಿಲ್ಲ ಹಾಗೂ ಯಾವುದೇ ರೀತಿಯ ದೇಣಿಗೆಗಳನ್ನೂ ಸ್ವೀಕರಿಸಿಲ್ಲ- ಸ್ವೀಕರಿಸುವುದಿಲ್ಲ. ಯುಪಿಪಿ ಸಂಪೂರ್ಣವಾಗಿ ಸತ್ಯವನ್ನು ಆಧರಿಸಿದೆ..
-
ಉತ್ತಮ ಪ್ರಜಾಕೀಯ ಪಕ್ಷವನ್ನು ಪ್ರಜೆಗಳಿಗಾಗಿಯೇ ಕಟ್ಟಲಾಗಿದೆ..
-
ಚುನಾವಣೆಗಳಲ್ಲಿ ಸ್ಪರ್ಧಿಸುವ ಮೂಲಕ ನೀವು ನೇರವಾಗಿ ಭಾಗವಹಿಸಬಹುದು ಅಥವಾ ನೀವು ಯುಪಿಪಿಯನ್ನು ಬೆಂಬಲಿಸಬಹುದು
-
ಯಾರಾದರೂ ಪ್ರಜಾಕೀಯ (ಪ್ರಜಾ ಪ್ರಭುತ್ವ) ಸಿದ್ಧಾಂತಗಳನ್ನು ಹರಡಬಹುದು/ ಅರಿವು ಮೂಡಿಸಬಹುದು ಮತ್ತು ಯುಪಿಪಿಯನ್ನು ಬೆಂಬಲಿಸಬಹುದು
-
ಹಣವನ್ನು ಸಂಗ್ರಹಿಸುವುದು ಅಥವಾ ಖರ್ಚು ಮಾಡುವುದನ್ನು ಇಲ್ಲಿ ಕಟ್ಟುನಿಟ್ಟಾಗಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ
-
ತಾನು ನಾಯಕನಾಗಬಹುದೆಂದು ನಂಬುವ ಯಾವುದೇ ವ್ಯಕ್ತಿಯು ಯುಪಿಪಿಯ ಬೆಂಬಲಿಗರಾಗಬಹುದು(ಇತರ ನಾಯಕರನ್ನು ನಂಬುವುದು ರಾಜಕೀಯ)
-
ಪ್ರಜಾಕೀಯದ ಸಿದ್ಧಾಂತಗಳನ್ನು ಯಾರು ಬೇಕಾದರೂ ತಮ್ಮ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು, ನೆರೆಹೊರೆಯವರು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದು
-
ನಿಮ್ಮ ದೈನಂದಿನ ದಿನಚರಿಯಲ್ಲಿ ಸಿಗುವ ಯಾವುದೇ ಹೆಚ್ಚುವರಿ ಸಮಯದಲ್ಲಿ ವೈಯಕ್ತಿಕವಾಗಿ ಭೇಟಿ ಮಾಡಿ ಮಾತನಾಡುವ ಮೂಲಕ ಅಥವಾ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್, ಯುಟ್ಯೂಬ್, ವಾಟ್ಸಾಪ್, ಟೆಲಿಗ್ರಾಮ್, ಲಿಂಕ್ಡ್ಇನ್ ಮುಂತಾದ ವಿವಿಧ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಪ್ರಜಾಕೀಯ ಸಿದ್ಧಾಂತಗಳನ್ನು ಪ್ರಚಾರ ಮಾಡಲು, ಅರಿವು ಮೂಡಿಸಲು ಬಳಸಬಹುದು
ನಮ್ಮ ಇತ್ತೀಚಿನ ಚಿತ್ರ ಗ್ಯಾಲರಿ
ನಮ್ಮ ಇತ್ತೀಚಿನ ವೀಡಿಯೊ ಗ್ಯಾಲರಿ
ನಮ್ಮ ಸಮಾಜಿಕ ಜಾಲತಾಣಗಳು