ಮುಖ ಪುಟ

ಆಕಾಂಕ್ಷಿಗಳ ನೋಂದಣಿ

ಆಕಾಂಕ್ಷಿಗಳ ಪಟ್ಟಿ

ಆಯ್ಕೆಯಾದ ಆಕಾಂಕ್ಷಿಗಳು

ಪ್ರತಿಕ್ರಿಯೆ

English

ಉತ್ತಮ ಪ್ರಜಾಕೀಯ ಪಕ್ಷ®

ಇದು ಮತದಾರರಾದ ನಮ್ಮ ಪಕ್ಷ

ನಮ್ಮ ಅಧಿಕೃತ ಚಿಹ್ನೆ: ಆಟೋರಿಕ್ಷಾ

ಇಮೇಲ್:
[email protected]

ಆಯ್ಕೆಯಾದ ಆಕಾಂಕ್ಷಿಗಳ ಪಟ್ಟಿ

ಉತ್ತಮ ಪ್ರಜಾಕೀಯ ಪಕ್ಷದಿಂದ ವಿವಿಧ ಚುನಾವಣೆಗಳಿಗಾಗಿ ಟಿಕೆಟ್ ಪಡೆಯಲು ನೊಂದಣಿ ಮಾಡಿಕೊಂಡ ಆಕಾಂಕ್ಷಿಗಳ ಹೆಸರು, ಫೋನ್ ನಂಬರ್, ಕ್ಷೇತ್ರ, ಮತ್ತು ಯಾವ ಚುನಾವಣೆಗೆ ಸ್ಪರ್ಧಿಸಲು ಬಯಸುತ್ತಿದ್ದಾರೆ ಎನ್ನುವ ವಿವರಗಳನ್ನು ಇಲ್ಲಿ ಪ್ರಕಟಿಸಲಾಗುವುದು.

2023 ವಿಧಾನಸಭಾ ಚುನಾವಣೆ : ಮೊದಲನೇ ಮತ್ತು ಎರಡನೇ ಸುತ್ತಿನಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿ
ಉತ್ತಮ ಪ್ರಜಾಕೀಯ ಪಕ್ಷದಿಂದ ಮುಂಬರುವ 2023ನೇ ಸಾಲಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯಲು ದಿನಾಂಕ 28.02.2023 ರ ಒಳಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವ ಆಕಾಂಕ್ಷಿಗಳ ಹೆಸರು, ಫೋನ್ ನಂಬರ್, ಕ್ಷೇತ್ರ, ಫೇಸ್ಬುಕ್ ಲಿಂಕ್, ಮತದಾರರ ಶಿಫಾರಸ್ಸು ಪತ್ರದ ಸಹಿಗಳು ಹಾಗೂ ಅದರ ಫೋಟೋ / ವೀಡಿಯೋಗಳ ವಿವರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

ಆಕಾಂಕ್ಷಿಗಳ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಗಾಗಿ ಆಕಾಂಕ್ಷಿಗಳ ಫೇಸ್ಬುಕ್ ಖಾತೆಯನ್ನು ಪರೀಕ್ಷಿಸಿರಿ.

ಗಮನಿಸಿ: ಮುಂಬರುವ 2023ನೇ ಸಾಲಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯಲು ಅರ್ಜಿಗಳನ್ನು ಸಲ್ಲಿಸಲು ಈ ಹಿಂದೆ ಫೆಬ್ರವರಿ 28 ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿತ್ತು. ಆದರೆ ಹಲವಾರು ಆಕಾಂಕ್ಷಿಗಳು ಪ್ರತಿದಿನ ಅರ್ಜಿಗಳನ್ನು ಸಲ್ಲಿಸುತ್ತಿದ್ದು, ಮಾರ್ಚ್ 25 ರ ವರೆಗೆ ಹೆಚ್ಚಿನ ಕಾಲಾವಕಾಶವನ್ನು ನೀಡಲಾಗಿದೆ. ( 25.೦3.2023 ರ ವರೆಗೆ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಏಪ್ರಿಲ್ ಎರಡನೇ ವಾರದಲ್ಲಿ ಆಯ್ಕೆಯಾದ ಆಕಾಂಕ್ಷಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು.

ನಿಮ್ಮ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಬಗ್ಗೆ ನೀವೂ ಪರೀಕ್ಷಿಸಿ… ನೀವು ಮಾಡಬೇಕಾದದ್ದು ಇಷ್ಟೇ….

1. ಪ್ರಜಾಕೀಯ ವೆಬ್ಸೈಟ್ಗೆ ಲಾಗಿನ್ ಆಗಿರಿ.

2. ಆಯ್ಕೆಯಾದ ಆಕಾಂಕ್ಷಿಗಳ ಪಟ್ಟಿ ಯಲ್ಲಿ ಮತದಾರರ ಶಿಫಾರಸ್ಸು ಪತ್ರಕ್ಕೆ ಕ್ಷೇತ್ರದ ಮತದಾರರ ಸಹಿ ( ಕನಿಷ್ಟ 50 ) ಮಾಡಿಸಿದ್ದಾರೆಯೇ ?

3. ಅದರ ಫೋಟೋ ಮತ್ತು ವೀಡಿಯೋ ಸಲ್ಲಿಸಿದ್ದಾರೆಯೇ ?

4. ಫೇಸ್ಬುಕ್ ಲಿಂಕ್ ತೆರೆದಿಟ್ಟಿದ್ದಾರೆಯೇ ? ಮತ್ತು ಅದರಲ್ಲಿ ಅವರು ಪ್ರಜಾಕೀಯದ ವಿಚಾರಗಳ ಬಗ್ಗೆ ಸಕ್ರಿಯರಾಗಿದ್ದಾರೆಯೇ ?

ಮೇಲಿನ ಎಲ್ಲಾ ಮಾಹಿತಿಗಳನ್ನು ಕ್ಲಿಕ್ ಮಾಡಿ ಪರಿಶೀಲಿಸಿದ ನಂತರವೇ ವೋಟಿಂಗ್ ಆಯ್ಕೆ ಕಾಣಿಸುವುದು. ನೀವು ನೇರವಾಗಿ ವೋಟ್ ಮಾಡಬಹುದು. ಆಕಾಂಕ್ಷಿಗಳ ಬಗ್ಗೆ ಬೇರೆ ಯಾವುದೇ ಅಭಿಪ್ರಾಯವಿದ್ದಲ್ಲಿ ನೇರವಾಗಿ ನಮಗೆ ಇಮೈಲ್ ಮಾಡಿರಿ.

ಸಲ್ಲಿಕೆಯಾಗಿರುವ ಒಟ್ಟು ಅರ್ಜಿಗಳು: 432

ಅರ್ಜಿ ಸಲ್ಲಿಸಿರುವ ಒಟ್ಟು ಆಕಾಂಕ್ಷಿಗಳು: 262

ಯು.ಪಿ.ಪಿ ಪಕ್ಷದ ವತಿಯಿಂದ ಆಯ್ಕೆಯಾಗಿರುವ ಒಟ್ಟು ಆಕಾಂಕ್ಷಿಗಳು: 130

Loading...

Loading...

ಉತ್ತಮ ಪ್ರಜಾಕೀಯ ಪಕ್ಷ®
Regn. No.56 / 108 / 2018-18 / PPS-I dated 08.05.2018
ವಿಳಾಸ:
ಉತ್ತಮ ಪ್ರಜಾಕೀಯ ಪಕ್ಷ (ಯು.ಪಿ.ಪಿ) #17 ಎ, ಸುಮನೆ, 1ನೇ ಅಡ್ಡ ರಸ್ತೆ, 3ನೇ ಸ್ಟೇಜ್, 3ನೇ ಹಂತ, 6ನೇ ಬ್ಲಾಕ್ , ಬನಶಂಕರಿ 3ನೇ ಸ್ಟೇಜ್, ಕತ್ರಿಗುಪ್ಪೆ, ಬೆಂಗಳೂರು, ಕರ್ನಾಟಕ - 560085
ಇಮೇಲ್:
[email protected]

Copyright © 2023 Uttama Prajaakeeya Party. All rights reserved.