ಉತ್ತಮ ಪ್ರಜಾಕೀಯ ಪಕ್ಷ

ಇದು ಮತದಾರರಾದ ನಮ್ಮ ಪಕ್ಷ

MLC - ಕರ್ನಾಟಕ ವಿಧಾನ ಪರಿಷತ್ ಚುನಾವಣೆಗಳು

ಮುಂಬರುವ ಜೂನ್ 2024 ರ ಕರ್ನಾಟಕ MLC ವಿಧಾನ ಪರಿಷತ್ ಚುನಾವಣೆಯಲ್ಲಿ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ವ್ಯಕ್ತಿಗಳು ನಿರ್ದಿಷ್ಟ ವಿಧಾನವನ್ನು ಅನುಸರಿಸುವ ಅಗತ್ಯವಿದೆ. ಅವರು ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗಳಿಂದ ಮತದಾರರ ಶಿಫಾರಸ್ಸು ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು . ಈ ಪ್ರಕ್ರಿಯೆಯ ಭಾಗವಾಗಿ, ಅವರು ಮತದಾರರ ಶಿಫಾರಸ್ಸು ಪತ್ರದಲ್ಲಿ ನಮೂದಿಸಲಾದ ಅಂಶಗಳಿಗೆ ಬದ್ಧರಾಗಿರಬೇಕು ಮತ್ತು ಪದವೀಧರರು ಮತ್ತು ಶಿಕ್ಷಕರ ಚುನಾವಣೆಗಳಿಗೆ ನೋಂದಾಯಿಸಿಕೊಂಡಿರುವ ಅರ್ಹ ಪದವೀಧರ ಮತ್ತು ಶಿಕ್ಷಕರ ಮತದಾರರಿಂದ ಶಿಫಾರಸ್ಸು ಸಹಿಗಳನ್ನು ಪಡೆಯಬೇಕು. ನಂತರ ಅಭ್ಯರ್ಥಿಗಳು ವಿಧಾನ ಪರಿಷತ್ ಚುನಾವಣಾ ಅರ್ಜಿ ನಮೂನೆಯನ್ನು ಅಗತ್ಯ ಮಾಹಿತಿ ಮತ್ತು ಸರಿಯಾದ ದಾಖಲೆಗಳೊಂದಿಗೆ ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಸಲ್ಲಿಸಬೇಕು.

ಈ ಪ್ರಕ್ರಿಯೆ ಅರ್ಜಿ ಸಲ್ಲಿಸುವ ಟಿಕೆಟ್ ಆಕಾಂಕ್ಷಿಗೆ ಕಡ್ಡಾಯವಾಗಿರುತ್ತದೆ

ಮತದಾರರ ಶಿಫಾರಸ್ಸು ಪತ್ರವನ್ನು ಡೌನ್‌ಲೋಡ್ ಮಾಡಿ

ಕೆಳಗಿನ ಸೂಚನೆಗಳನ್ನು ಸರಿಯಾಗಿ ಗಮನಿಸಿ:-

 1. ವಿಧಾನ ಪರಿಷತ್ ಚುನಾವಣೆಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಲು ಬಯಸುವ ಆಕಾಂಕ್ಷಿಗಳು ವಿಧಾನ ಪರಿಷತ್ ಚುನಾವಣೆಯ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಸ್ವಯಂ ತಿಳಿದುಕೊಂಡಿರಬೇಕು
 2. ಪ್ರಜಾಕೀಯದ ಸಿದ್ದಂತಗಳನ್ನು ಸಂಪೂರ್ಣವಾಗಿ ತಿಳಿದುಕೊಂಡಿರಬೇಕು ಹಾಗು ಬದ್ಧವಾಗಿರಬೇಕು
 3. ಉತ್ತಮ ಪ್ರಜಾಕೀಯ ಪಕ್ಷದ ಎಲ್ಲಾ ನಿಯಮಾವಳಿಗಳು ಹಾಗು ಮಾನದಂಡಗಳಿಗೆ ಬದ್ಧರಾಗಿರಬೇಕು
 4. ಒಬ್ಬರಿಗೆ ಒಂದು ಚುನಾವಣಾ ಅರ್ಜಿಯನ್ನು ಸಲ್ಲಿಸಲು ಅವಕಾಶವಿದ್ದು, ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಅಂತಹ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ
 5. ಚುನಾವಣಾ ಅರ್ಜಿಯಲ್ಲಿ ನೀಡಲಾಗಿರುವ ಎಲ್ಲ ಮಾಹಿತಿಗಳು ಸಮರ್ಪಕವಾಗಿರಬೇಕು ಹಾಗು ಎಲ್ಲ ದಾಖಲೆಗಳು ಸರಿಯಾಗಿ - ಸ್ಪಷ್ಟವಾಗಿರಬೇಕು
 6. ಚುನಾವಣೆಗೆ ಸಂಭಂದಿಸಿದಂತೆ ಯಾವುದೇ ಅಗತ್ಯವಾದ ಚುನಾವಣಾ ಸಂಭಂದಿಸಿದ ವೆಚ್ಚಗಳನ್ನು ಸ್ವಯಂ ಭರಿಸಬೇಕು
 7. ಮತದಾರರ ಶಿಫಾರಸ್ಸುಪತ್ರದೊಂದಿಗೆ ಮತದಾರರ ಸಹಿ-ಫೋನ್ ನಂಬರ್ ಮತ್ತು ಪದವೀಧರ ಪ್ರಮಾಣಪತ್ರದ ಪ್ರತಿ ಅಥವಾ ಶಿಕ್ಷಕರ ಗುರುತಿನಪತ್ರವನ್ನು ಕಡ್ಡಾಯವಾಗಿ ಸಂಗ್ರಹಿಸಿಕೊಂಡಿರಬೇಕು (ಸಹಿ ಸಂಗ್ರಹಣೆಯ ಫೋಟೋ ಸಹ ಅರ್ಜಿ ಸಲ್ಲಿಸುವಾಗ ಅಪ್ಲೋಡ್ ಮಾಡಬೇಕು)
 8. ಪ್ರಜಾಕೀಯ ಸಿದ್ದಂತಾದ ವಿರುದ್ಧವಾಗಿ ನಡೆದುಕೊಳ್ಳುವವರ ಹಾಗು ಉತ್ತಮ ಪ್ರಜಾಕೀಯ ಪಕ್ಷ ಬಾಹಿರ ಯಾವುದೇ ಚಟುವಟಿಕೆಗಳಲ್ಲಿ ಆಕಾಂಕ್ಷಿಯು ತೊಡಗಿಕೊಂಡಿರುವುದು ಕಂಡು ಬಂದಲ್ಲಿ ಅಂತಹ ಆಕಾಂಕ್ಷಿಗಳ ಅರ್ಜಿಗಳನ್ನು ಮಾನ್ಯ ಮಾಡುವುದಿಲ್ಲ ಅಥವಾ ತಿರಸ್ಕರಿಸಲಾಗುವುದು

ಮತದಾರರ ಶಿಫಾರಸ್ಸು ಪತ್ರದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಅರ್ಹ ಪದವೀಧರ ಮತದಾರರಿಂದ ಮತ್ತು ಶಿಕ್ಷಕ ಮತದಾರರಿಂದ ಶಿಫಾರಸ್ಸು ಸಹಿ ಸಂಗ್ರಹಿಸಿಕೊಂಡು ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಲ್ಲಿ ವಿಧಾನ ಪರಿಷತ್ ಚುನಾವಣೆ ಚುನಾವಣೆ ಅರ್ಜಿಯನ್ನು ಸೂಕ್ತ ಮಾಹಿತಿ ಹಾಗೂ ಧಾಖಲೆಗಳೊಂದಿಗೆ ಸಲ್ಲಿಸಬೇಕು.

ಈ ಪ್ರಕ್ರಿಯೆ ಅರ್ಜಿ ಸಲ್ಲಿಸುವ ಟಿಕೆಟ್ ಆಕಾಂಕ್ಷಿಗೆ ಕಡ್ಡಾಯವಾಗಿರುತ್ತದೆ

ಚುನಾವಣೆ ನಡೆಯಲಿರುವ ಪದವೀಧರರ ಕ್ಷೇತ್ರಗಳು:-

 1. ಕರ್ನಾಟಕ ಈಶಾನ್ಯ ಪದವೀಧರರು
 2. ಕರ್ನಾಟಕ ನೈಋತ್ಯ ಪದವೀಧರರು
 3. ಬೆಂಗಳೂರು ಪದವೀಧರರು

ಚುನಾವಣೆ ನಡೆಯಲಿರುವ ಶಿಕ್ಷಕರ ಕ್ಷೇತ್ರಗಳು:-

 1. ಕರ್ನಾಟಕ ಆಗ್ನೇಯ ಶಿಕ್ಷಕರು
 2. ಕರ್ನಾಟಕ ನೈಋತ್ಯ ಶಿಕ್ಷಕರು
 3. ಕರ್ನಾಟಕ ದಕ್ಷಿಣ ಶಿಕ್ಷಕರು
 4. ಬೆಂಗಳೂರು ಶಿಕ್ಷಕರ ಕ್ಷೇತ್ರ

ಸೂಚನೆ: ಒಬ್ಬ ವ್ಯಕ್ತಿಗೆ ಒಂದು ಚುನಾವಣಾ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.. ಹಾಗಾಗಿ ಎಲ್ಲ ವಿವರಗಳನ್ನು ಸರಿಯಾಗಿ ಓದಿ ಸ್ಪಷ್ಟವಾದ ಮಾಹಿತಿಗಳೊಂದಿಗೆ ಸೂಕ್ತ ಕ್ರಮದಲ್ಲಿ ತಮ್ಮ ಅರ್ಜಿಯನ್ನು ಸಲ್ಲಿಸಿರಿ

ಮುಖ್ಯ ಸೂಚನೆ:- ಉತ್ತಮ ಪ್ರಜಾಕೀಯ ಪಕ್ಷದ ವೆಬ್ಸೈಟ್ ನಲ್ಲಿ ಡಿಸೆಂಬರ್ ಮೊದಲನೇ ವಾರದಿಂದ ಆಕಾಂಕ್ಷಿ ಗಳಿಗೆ ವಿಧಾನ ಪರಿಷತ್ ಚುನಾವಣೆಗಳಿಗೆ ಅಭ್ಯರ್ಥಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡಲಾಗುವುದು.