ಉತ್ತಮ ಪ್ರಜಾಕೀಯ ಪಕ್ಷ

ಇದು ಮತದಾರರಾದ ನಮ್ಮ ಪಕ್ಷ

MLC - ಕರ್ನಾಟಕ ವಿಧಾನ ಪರಿಷತ್ ಚುನಾವಣೆಗಳು

ಪದವೀಧರ ಮತ್ತು ಶಿಕ್ಷಕ ಮತದಾರರ ಗಮನಕ್ಕೆ:-

ಮುಂಬರುವ 2024 ರ ಜೂನ್‌ ನಲ್ಲಿ ಕರ್ನಾಟಕ MLC-ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು... ಈ ಚುನಾವಣೆಯಲ್ಲಿ ಮತ ಚಲಾಯಿಸಬೇಕೆಂದರೆ / ಅರ್ಹತೆ ಪಡೆಯಬೇಕೆಂದರೆ ಎಲ್ಲಾ ಪದವೀಧರರು ಮತ್ತು ಶಿಕ್ಷಕರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಮತದಾರರ ನೋಂದಣಿ ಪ್ರಕ್ರಿಯೆಗೆ ಕೊನೆಯ ದಿನಾಂಕ 2023 ನವೆಂಬರ್ 6 ಆಗಿರುತ್ತದೆ.. ಆಸಕ್ತ ಪದವೀಧರರ ಮತದಾರರು ಫಾರ್ಮ್ 18 ಭರ್ತಿ ಮಾಡಿ, ಆಸಕ್ತ ಶಿಕ್ಷಕ ಮತದಾರರು ಫಾರ್ಮ್ 19 ಭರ್ತಿ ಮಾಡಿ ಸ್ಥಳೀಯ ಚುನಾವಣಾ ಅಧಿಕಾರಿಗಳ ಬಳಿ ಮತದಾರರ ನೋಂದಣಿ ಮಾಡಿಕೊಳ್ಳಿರಿ.

ಪದವೀಧರರು ಮತ್ತು ಶಿಕ್ಷಕರು ವಿಧಾನ ಪರಿಷತ್ ಚುನಾವಣೆಯ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ತಮ್ಮ ಕ್ಷೇತ್ರದಲ್ಲಿನ ಸ್ಥಳೀಯ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಅಥವಾ ಮುಖ್ಯ ಚುನಾವಣಾಧಿಕಾರಿ ಕರ್ನಾಟಕ ವೆಬ್ಸೈಟ್ ಗೆ ಭೇಟಿ ನೀಡಿರಿ (ವೆಬ್ಸೈಟ್ ಲಿಂಕ್: https://ceo.karnataka.gov.in/ )

ಕರ್ನಾಟಕ ವಿಧಾನ ಪರಿಷತ್ ಚುನಾವಣೆ ನಡೆಯಲಿರುವ ಪದವೀಧರರ ಕ್ಷೇತ್ರಗಳು:-

 1. ಕರ್ನಾಟಕ ಈಶಾನ್ಯ ಪದವೀಧರರು
 2. ಕರ್ನಾಟಕ ನೈಋತ್ಯ ಪದವೀಧರರು
 3. ಬೆಂಗಳೂರು ಪದವೀಧರರು

ಪಧವೀಧರರ ಚುನಾವಣೆಗೆ ಹೆಸರು ನೋಂದಣಿ ಮಾಡಿಸಿಕೊಳ್ಳಲು:-

ಪದವೀಧರರು 6ನೇ ನವೆಂಬರ್ 2023 ರ ಒಳಗೆ ಕೆಳಗೆ ನೀಡಲಾಗಿರುವ ಫಾರ್ಮ್ 18 ಅನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾದ ಮಾಹಿತಿಗಳೊಂದಿಗೆ ಭರ್ತಿ ಮಾಡಿ ಸರಿಯಾದ ದಾಖಲೆಗಳೊಂದಿಗೆ ಅರ್ಜಿಯನ್ನು ಸ್ಥಳೀಯ ಚುನಾವಣಾ ಅಧಿಕಾರಿಗಳ ಬಳಿ ಸಲ್ಲಿಸಿ ಮತದಾರರ ನೋಂದಣಿ ಕಡ್ಡಾಯವಾಗಿ ಮಾಡಿಕೊಳ್ಳಿರಿ.

ಫಾರಂ 18 ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿರಿ

ಪದವೀಧರರು ಸರಿಯಾದ ದಾಖಲೆಗಳೊಂದಿಗೆ ಫಾರಂ 18 ಅನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಿ.

ಸೂಚನೆಗಳು :-

 1. ಅರ್ಜಿಗಳನ್ನು ನಿಯೋಜಿತ ಅಧಿಕಾರಿಗೆ ಅಂಚೆ ಮೂಲಕ ಕಳುಹಿಸಿದರೆ, ಅರ್ಜಿದಾರನು ತನ್ನ ಅರ್ಜಿಯೊಂದಿಗೆ ತನ್ನ ಪದವಿಯ ಪ್ರತಿಯನ್ನು ಲಗತ್ತಿಸಬೇಕು. ಪ್ರಮಾಣಪತ್ರ/ಮಾರ್ಕ್ ಶೀಟ್ ಸರಿಯಾಗಿ ಸ್ವಯಂ ದೃಢೀಕರಿಸಲ್ಪಟ್ಟಿರಬೇಕು.
 2. ಅರ್ಜಿದಾರನು ತನ್ನ ಅರ್ಜಿಯನ್ನು ನಿಯೋಜಿತ ಅಧಿಕಾರಿಯ ಮುಂದೆ ನೇರವಾಗಿ ಮುಖತಃ ಸಲ್ಲಿಸಿದರೆ, ಪದವಿ/ಪ್ರಮಾಣಪತ್ರ/ಮಾರ್ಕ್ ಶೀಟ್ ಗಳ ಮೂಲ ಪ್ರತಿಯನ್ನು ತೋರಿಸಬೇಕು
 3. ಪಧವೀಧರರಿಂದ ಸಲ್ಲಿಕೆಯಾದ ಅರ್ಜಿಯಲ್ಲಿನ ಹೇಳಿಕೆಗಳು ಅಥವಾ ಘೋಷಣೆಯ ತಪ್ಪಿದ್ದಲ್ಲಿ 1950ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 31ರ ಅಡಿಯಲ್ಲಿ ಶಿಕ್ಷಾರ್ಹವಾಗಿರುತ್ತದೆ.

ಕರ್ನಾಟಕ ವಿಧಾನ ಪರಿಷತ್ ಚುನಾವಣೆ ನಡೆಯಲಿರುವ ಶಿಕ್ಷಕರ ಕ್ಷೇತ್ರಗಳು:-

 1. ಕರ್ನಾಟಕ ಆಗ್ನೇಯ ಶಿಕ್ಷಕರು
 2. ಕರ್ನಾಟಕ ನೈಋತ್ಯ ಶಿಕ್ಷಕರು
 3. ಕರ್ನಾಟಕ ದಕ್ಷಿಣ ಶಿಕ್ಷಕರು
 4. ಬೆಂಗಳೂರು ಶಿಕ್ಷಕರ ಕ್ಷೇತ್ರ

ಶಿಕ್ಷಕರ ಚುನಾವಣೆಗೆ ಹೆಸರು ನೋಂದಣಿ ಮಾಡಿಸಿಕೊಳ್ಳಲು:-

ಶಿಕ್ಷಕರು 6ನೇ ನವೆಂಬರ್ 2023 ರ ಒಳಗೆ ಕೆಳಗೆ ನೀಡಲಾಗಿರುವ ಫಾರ್ಮ್ 19 ಅನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾದ ಮಾಹಿತಿಗಳೊಂದಿಗೆ ಭರ್ತಿ ಮಾಡಿ ಸರಿಯಾದ ದಾಖಲೆಗಳೊಂದಿಗೆ ಅರ್ಜಿಯನ್ನು ಸ್ಥಳೀಯ ಚುನಾವಣಾ ಅಧಿಕಾರಿಗಳ ಬಳಿ ಸಲ್ಲಿಸಿ ಮತದಾರರ ನೋಂದಣಿ ಕಡ್ಡಾಯವಾಗಿ ಮಾಡಿಕೊಳ್ಳಿರಿ.

ಫಾರಂ 19 ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿರಿ

ಶಿಕ್ಷಕರು ಸರಿಯಾದ ದಾಖಲೆಗಳೊಂದಿಗೆ ಫಾರಂ 18 ಅನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಿ.

ಸೂಚನೆಗಳು :-

 1. ಶಿಕ್ಷಕರು ಹಿಂದಿನಆರು ವರ್ಷ ಅವಧಿಯಲ್ಲಿ ಕನಿಷ್ಠ ಮೂರು ವರ್ಷ ಶಿಕ್ಷಣ ಸಂಸ್ಥೆಯಲ್ಲಿ ಮಾಧ್ಯಮಿಕ ಶಾಲೆ ಅಥವಾ ಮೇಲ್ಪಟ್ಟ ಅನುಭವ ಹೊಂದಿರಬೇಕು.
 2. ಶಿಕ್ಷಕರ ಕ್ಷೇತ್ರಕ್ಕೆ ಮತದಾರರಾಗಿ ನೋಂದಾಯಿಸಿಕೊಳ್ಳಲು ಫಾರಂ 19 ಪ್ರತಿ ಅರ್ಜಿಯೊಂದಿಗೆ ಶೈಕ್ಷಣಿಕ ಮುಖ್ಯಸ್ಥರಿಂದ ಪ್ರಮಾಣಪತ್ರ ಲಗತ್ತಿಸಬೇಕು.
 3. ಕಳೆದ ಹಿಂದಿನ ಆರು ವರ್ಷಗಳಲ್ಲಿ ಒಟ್ಟು ಮೂರು ವರ್ಷಗಳ ಅವಧಿಗೆ ಶಿಕ್ಷಕರಾಗಿ ಕಾರ್ಯನಿರ್ವಹಿಸಿರುವ ಬಗ್ಗೆ ಸಂಸ್ಥೆಯ ಮೂಲಕ ಪ್ರಮಾಣೀಕರಿಸುವ ಫಾರ್ಮ್ಯಾಟ್ ಪ್ರಮಾಣಪತ್ರವು ಈ ಕೆಳಗಿನಂತಿರುತ್ತದೆ:-

 4. ಅರ್ಜಿ ಸಲ್ಲಿಸಿದ ದಿನಾಂಕದಂದು ಬೋಧನೆಯಲ್ಲಿ ತೊಡಗಿರದ ವ್ಯಕ್ತಿಯ ಸಂದರ್ಭದಲ್ಲಿ, ಪ್ರಮಾಣಪತ್ರವನ್ನು ಸಂಸ್ಥೆಯ ಮುಖ್ಯಸ್ಥರು ಸಹಿ ಮಾಡಬೇಕು.
 5. ವೈಯಕ್ತಿಕವಾಗಿ ಅಥವಾ ಅಂಚೆಯ ಮೂಲಕ ಸಲ್ಲಿಸಲಾದ ದೊಡ್ಡ ಪ್ರಮಾಣದ ಅರ್ಜಿಗಳನ್ನು ಸೇರ್ಪಡೆಗಾಗಿ ಪರಿಗಣಿಸಲಾಗುವುದಿಲ್ಲ. ಆದರೆ, ಸಂಸ್ಥೆಗಳ ಮುಖ್ಯಸ್ಥರು ರವಾನಿಸಬಹುದು.
 6. ಅರ್ಜಿದಾರನು ತನ್ನ ಅರ್ಜಿಯನ್ನು ನಿಯೋಜಿತ ಅಧಿಕಾರಿಯ ಮುಂದೆ ನೇರವಾಗಿ ಮುಖತಃ ಸಲ್ಲಿಸಿದರೆ, ಅಧಿಕಾರಿಯ ಮುಂದೆ ಪದವಿ/ಪ್ರಮಾಣಪತ್ರ/ಮಾರ್ಕ್ ಶೀಟ್ ಗಳ ಮೂಲ ಪ್ರತಿಯನ್ನು ತೋರಿಸಬೇಕು.
 7. ಶಿಕ್ಷಕರಿಂದ ಸಲ್ಲಿಕೆಯಾದ ಅರ್ಜಿಯಲ್ಲಿನ ಹೇಳಿಕೆಗಳು ಅಥವಾ ಘೋಷಣೆಯ ತಪ್ಪಿದ್ದಲ್ಲಿ 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 31ರ ಅಡಿಯಲ್ಲಿ ಶಿಕ್ಷಾರ್ಹವಾಗಿರುತ್ತದೆ.

MLC ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಬಯಸುವ ಆಕಾಂಕ್ಷಿಗಳ ಗಮನಕ್ಕೆ:-

ಚುನಾವಣೆ ನಡೆಯಲಿರುವ ಪದವೀಧರರ ಕ್ಷೇತ್ರಗಳು:-

 1. ಕರ್ನಾಟಕ ಈಶಾನ್ಯ ಪದವೀಧರರು
 2. ಕರ್ನಾಟಕ ನೈಋತ್ಯ ಪದವೀಧರರು
 3. ಬೆಂಗಳೂರು ಪದವೀಧರರು

ಚುನಾವಣೆ ನಡೆಯಲಿರುವ ಶಿಕ್ಷಕರ ಕ್ಷೇತ್ರಗಳು:-

 1. ಕರ್ನಾಟಕ ಆಗ್ನೇಯ ಶಿಕ್ಷಕರು
 2. ಕರ್ನಾಟಕ ನೈಋತ್ಯ ಶಿಕ್ಷಕರು
 3. ಕರ್ನಾಟಕ ದಕ್ಷಿಣ ಶಿಕ್ಷಕರು
 4. ಬೆಂಗಳೂರು ಶಿಕ್ಷಕರ ಕ್ಷೇತ್ರ

ಮುಂಬರುವ 2024 ರ ಜೂನ್‌ ನಲ್ಲಿ ಕರ್ನಾಟಕ MLC - ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು... ಈ ಚುನಾವಣೆಯಲ್ಲಿ ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸುವ ಆಕಾಂಕ್ಷಿ ಅಭ್ಯರ್ಥಿಗಳು ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಿಂದ ಕೆಳಗೆ ನೀಡಲಾಗಿರುವ ಮತದಾರರ ಶಿಫಾರಸ್ಸು ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು, ಮತದಾರರ ಶಿಫಾರಸ್ಸು ಪತ್ರದಲ್ಲಿನ ಒಂಬತ್ತು ಅಂಶಗಳಿಗೆ ತಾವು ಬದ್ಧರಾಗಿರುತ್ತೀರಿ ಎಂದು ಖಚಿತಪಡಿಕೊಂಡು ನಂತರ ಪದವೀಧರರು ಮತ್ತು ಶಿಕ್ಷಕರ ಚುನಾವಣೆಗೆ ಮತದಾರರಾಗಿ ನೋಂದಾಯಿಸಿಕೊಂಡಿರುವ ಅರ್ಹ ಪದವೀಧರರು ಮತ್ತು ಶಿಕ್ಷಕ ಮತದಾರರಿಂದ ಶಿಫಾರಸ್ಸು ಸಹಿ ಸಂಗ್ರಹಿಸಿಕೊಂಡು ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಲ್ಲಿ ವಿಧಾನ ಪರಿಷತ್ ಚುನಾವಣೆ ಚುನಾವಣೆ ಅರ್ಜಿಯನ್ನು ಸೂಕ್ತ ಮಾಹಿತಿ ಹಾಗೂ ದಾಖಲೆ ಗಳೊಂದಿಗೆ ಸಲ್ಲಿಸಿರಿ

ಮತದಾರರ ಶಿಫಾರಸ್ಸು ಪತ್ರ : ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿರಿ

ಕೆಳಗಿನ ಸೂಚನೆಗಳನ್ನು ಸರಿಯಾಗಿ ಗಮನಿಸಿ:-

 1. ವಿಧಾನ ಪರಿಷತ್ ಚುನಾವಣೆಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಲು ಬಯಸುವ ಆಕಾಂಕ್ಷಿಗಳು ವಿಧಾನ ಪರಿಷತ್ ಚುನಾವಣೆಯ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಸ್ವಯಂ ತಿಳಿದುಕೊಂಡಿರಬೇಕು
 2. ಪ್ರಜಾಕೀಯದ ಸಿದ್ದಂತಗಳನ್ನು ಸಂಪೂರ್ಣವಾಗಿ ತಿಳಿದುಕೊಂಡಿರಬೇಕು ಹಾಗು ಬದ್ಧವಾಗಿರಬೇಕು
 3. ಉತ್ತಮ ಪ್ರಜಾಕೀಯ ಪಕ್ಷದ ಎಲ್ಲಾ ನಿಯಮಾವಳಿಗಳು ಹಾಗು ಮಾನದಂಡಗಳಿಗೆ ಬದ್ಧರಾಗಿರಬೇಕು
 4. ಒಬ್ಬರಿಗೆ ಒಂದು ಚುನಾವಣಾ ಅರ್ಜಿಯನ್ನು ಸಲ್ಲಿಸಲು ಅವಕಾಶವಿದ್ದು, ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಅಂತಹ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ
 5. ಚುನಾವಣಾ ಅರ್ಜಿಯಲ್ಲಿ ನೀಡಲಾಗಿರುವ ಎಲ್ಲ ಮಾಹಿತಿಗಳು ಸಮರ್ಪಕವಾಗಿರಬೇಕು ಹಾಗು ಎಲ್ಲ ದಾಖಲೆಗಳು ಸರಿಯಾಗಿ - ಸ್ಪಷ್ಟವಾಗಿರಬೇಕು
 6. ಚುನಾವಣೆಗೆ ಸಂಭಂದಿಸಿದಂತೆ ಯಾವುದೇ ಅಗತ್ಯವಾದ ಚುನಾವಣಾ ಸಂಭಂದಿಸಿದ ವೆಚ್ಚಗಳನ್ನು ಸ್ವಯಂ ಭರಿಸಬೇಕು
 7. ಮತದಾರರ ಶಿಫಾರಸ್ಸುಪತ್ರದೊಂದಿಗೆ ಮತದಾರರ ಸಹಿ-ಫೋನ್ ನಂಬರ್ ಮತ್ತು ಪದವೀಧರ ಪ್ರಮಾಣಪತ್ರದ ಪ್ರತಿ ಅಥವಾ ಶಿಕ್ಷಕರ ಗುರುತಿನಪತ್ರವನ್ನು ಕಡ್ಡಾಯವಾಗಿ ಸಂಗ್ರಹಿಸಿಕೊಂಡಿರಬೇಕು (ಸಹಿ ಸಂಗ್ರಹಣೆಯ ಫೋಟೋ ಸಹ ಅರ್ಜಿ ಸಲ್ಲಿಸುವಾಗ ಅಪ್ಲೋಡ್ ಮಾಡಬೇಕು)
 8. ಪ್ರಜಾಕೀಯ ಸಿದ್ದಂತಾದ ವಿರುದ್ಧವಾಗಿ ನಡೆದುಕೊಳ್ಳುವವರ ಹಾಗು ಉತ್ತಮ ಪ್ರಜಾಕೀಯ ಪಕ್ಷ ಬಾಹಿರ ಯಾವುದೇ ಚಟುವಟಿಕೆಗಳಲ್ಲಿ ಆಕಾಂಕ್ಷಿಯು ತೊಡಗಿಕೊಂಡಿರುವುದು ಕಂಡು ಬಂದಲ್ಲಿ ಅಂತಹ ಆಕಾಂಕ್ಷಿಗಳ ಅರ್ಜಿಗಳನ್ನು ಮಾನ್ಯ ಮಾಡುವುದಿಲ್ಲ ಅಥವಾ ತಿರಸ್ಕರಿಸಲಾಗುವುದು

ಮುಂಬರುವ ಜೂನ್ 2024 ರ ಕರ್ನಾಟಕ MLC ವಿಧಾನ ಪರಿಷತ್ ಚುನಾವಣೆಯಲ್ಲಿ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ವ್ಯಕ್ತಿಗಳು ನಿರ್ದಿಷ್ಟ ವಿಧಾನವನ್ನು ಅನುಸರಿಸುವ ಅಗತ್ಯವಿದೆ. ಅವರು ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗಳಿಂದ ಮತದಾರರ ಶಿಫಾರಸ್ಸು ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು . ಈ ಪ್ರಕ್ರಿಯೆಯ ಭಾಗವಾಗಿ, ಅವರು ಮತದಾರರ ಶಿಫಾರಸ್ಸು ಪತ್ರದಲ್ಲಿ ನಮೂದಿಸಲಾದ ಅಂಶಗಳಿಗೆ ಬದ್ಧರಾಗಿರಬೇಕು ಮತ್ತು ಪದವೀಧರರು ಮತ್ತು ಶಿಕ್ಷಕರ ಚುನಾವಣೆಗಳಿಗೆ ನೋಂದಾಯಿಸಿಕೊಂಡಿರುವ ಅರ್ಹ ಪದವೀಧರ ಮತ್ತು ಶಿಕ್ಷಕರ ಮತದಾರರಿಂದ ಶಿಫಾರಸ್ಸು ಸಹಿಗಳನ್ನು ಪಡೆಯಬೇಕು. ನಂತರ ಅಭ್ಯರ್ಥಿಗಳು ವಿಧಾನ ಪರಿಷತ್ ಚುನಾವಣಾ ಅರ್ಜಿ ನಮೂನೆಯನ್ನು ಅಗತ್ಯ ಮಾಹಿತಿ ಮತ್ತು ಸರಿಯಾದ ದಾಖಲೆಗಳೊಂದಿಗೆ ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಸಲ್ಲಿಸಬೇಕು.

ಸೂಚನೆ: ಒಬ್ಬ ವ್ಯಕ್ತಿಗೆ ಒಂದು ಚುನಾವಣಾ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.. ಹಾಗಾಗಿ ಎಲ್ಲ ವಿವರಗಳನ್ನು ಸರಿಯಾಗಿ ಓದಿ ಸ್ಪಷ್ಟವಾದ ಮಾಹಿತಿಗಳೊಂದಿಗೆ ಸೂಕ್ತ ಕ್ರಮದಲ್ಲಿ ತಮ್ಮ ಅರ್ಜಿಯನ್ನು ಸಲ್ಲಿಸಿರಿ.

ಅಭ್ಯರ್ಥಿ ಅರ್ಜಿ ಇಲ್ಲಿ ಸಲ್ಲಿಸಿ

ವಿಧಾನ ಪರಿಷತ್ ಚುನಾವಣೆಯ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ತಮ್ಮ ಕ್ಷೇತ್ರದಲ್ಲಿನ ಸ್ಥಳೀಯ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಅಥವಾ ಮುಖ್ಯ ಚುನಾವಣಾಧಿಕಾರಿ ಕರ್ನಾಟಕ ವೆಬ್ಸೈಟ್ ಗೆ ಭೇಟಿ ನೀಡಿರಿ (ವೆಬ್ಸೈಟ್ ಲಿಂಕ್: https://ceo.karnataka.gov.in/ )