ಉತ್ತಮ ಪ್ರಜಾಕೀಯ ಪಕ್ಷ

ಇದು ಮತದಾರರಾದ ನಮ್ಮ ಪಕ್ಷ

ಕರ್ನಾಟಕ ಲೋಕಸಭಾ ಚುನಾವಣೆ 2024

ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಬಯಸುವ ಆಕಾಂಕ್ಷಿಗಳ ಗಮನಕ್ಕೆ:-

ಮುಂಬರುವ 2024 ರ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ವ್ಯಕ್ತಿಗಳು ನಿರ್ದಿಷ್ಟ ವಿಧಾನವನ್ನು ಅನುಸರಿಸುವ ಅಗತ್ಯವಿದೆ. ಅವರು ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗಳಿಂದ ಮತದಾರರ ಶಿಫಾರಸ್ಸು ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಪ್ರಕ್ರಿಯೆಯ ಭಾಗವಾಗಿ, ಅವರು ಮತದಾರರ ಶಿಫಾರಸ್ಸು ಪತ್ರದಲ್ಲಿ ನಮೂದಿಸಲಾದ ಅಂಶಗಳಿಗೆ ಬದ್ಧರಾಗಿರಬೇಕು ಮತ್ತು ತಮ್ಮ ಲೋಕಸಭಾ ಕ್ಷೇತ್ರಗಳ ಮತದಾರರಿಂದ ಶಿಫಾರಸ್ಸು ಸಹಿಗಳನ್ನು ಪಡೆಯಬೇಕು. ನಂತರ ಅಭ್ಯರ್ಥಿಗಳು ಲೋಕಸಭಾ ಚುನಾವಣೆ ಅರ್ಜಿ ನಮೂನೆಯನ್ನು ಅಗತ್ಯ ಮಾಹಿತಿ ಮತ್ತು ಸರಿಯಾದ ದಾಖಲೆಗಳೊಂದಿಗೆ ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಸಲ್ಲಿಸಬೇಕು

ಮತದಾರರ ಶಿಫಾರಸ್ಸು ಪತ್ರ

ಕರ್ನಾಟಕ ಲೋಕಸಭಾ ಕ್ಷೇತ್ರಗಳು

ಕ್ಷೇತ್ರದ ಸಂಖ್ಯೆಕ್ಷೇತ್ರದ ಹೆಸರುಮೀಸಲಾತಿ
1ಚಿಕ್ಕೋಡಿ
2ಬೆಳಗಾವಿ
3ಬಾಗಲಕೋಟೆ
4ವಿಜಯಪುರಪ.ಜಾ
5ಕಲಬುರಗಿ (ಗುಲ್ಬರ್ಗ)ಪ.ಜಾ
6ರಾಯಚೂರುಪ.ಪಂ
7ಬೀದರ
8ಕೊಪ್ಪಳ
9ಬಳ್ಳಾರಿಪ.ಪಂ
10ಹಾವೇರಿ
11ಧಾರವಾಡ
12ಉತ್ತರ ಕನ್ನಡ
13ದಾವಣಗೆರೆ
14ಶಿವಮೊಗ್ಗ
15ಉಡುಪಿ-ಚಿಕ್ಕಮಗಳೂರು
16ಹಾಸನ
17ದಕ್ಷಿಣ ಕನ್ನಡ
18ಚಿತ್ರದುರ್ಗಪ.ಜಾ
19ತುಮಕೂರು
20ಮಂಡ್ಯ
21ಮೈಸೂರು-ಕೊಡಗು
22ಚಾಮರಾಜನಗರಪ.ಜಾ
23ಬೆಂಗಳೂರು ಗ್ರಾಮಾಂತರ
24ಬೆಂಗಳೂರು ಉತ್ತರ
25ಬೆಂಗಳೂರು ಕೇಂದ್ರ
26ಬೆಂಗಳೂರು ದಕ್ಷಿಣ
27ಚಿಕ್ಕಬಳ್ಳಾಪುರ
28ಕೋಲಾರಪ.ಜಾ

ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದಿಂದ ಭಾಗವಹಿಸಲು ಇಚ್ಛಿಸುವ ಆಕಾಂಕ್ಷಿಗಳು ಇಂದೇ ಪಕ್ಷದ ವೆಬ್ಸೈಟ್ ನಿಂದ ಮತದಾರರ ಶಿಫಾರಸ್ಸು ಪತ್ರವನ್ನು ಡೌನ್ಲೊಡ್ ಮಾಡಿಕೊಂಡು ಇಂದಿನಿಂದಲೇ ಅದರಲ್ಲಿರುವ ವಿಚಾರಗಳನ್ನು ತಮ್ಮ ತಮ್ಮ ಕ್ಷೇತ್ರದ ಮತದಾರರಿಗೆ ತಿಳಿಸಿ ಅವರ ಒಪ್ಪಿಗೆ ಪಡೆದು ಅವರ ಸಹಿಗಳನ್ನೂ ಸಂಗ್ರಹಿಸಿಕೊಳ್ಳುತ್ತಿರಬೇಕು ಹಾಗೂ ಆಕಾಂಕ್ಷಿಗಳು ಮತದಾರರ ಶಿಫಾರಸ್ಸು ಪತ್ರವನ್ನು ವಿವರಿಸುತ್ತಿರುವ ಮತ್ತು ಸಹಿ ಸಂಗ್ರಹಿಸುತ್ತಿರುವ ಫೋಟೋ/ ವೀಡಿಯೋಗಳನ್ನೂ ರೆಕಾರ್ಡ್ ಮಾಡಿಕೊಂಡು ತಮ್ಮ ಫೇಸ್ಬುಕ್ ಖಾತೆಗಳಲ್ಲಿ ನಿರಂತರವಾಗಿ ಅಪ್ಲೋಡ್/ ಪೋಸ್ಟ್ ಮಾಡಿಕೊಳ್ಳುತ್ತಿರಬೇಕು.(ನಿಮ್ಮ ಫೇಸ್ಬುಕ್ ಖಾತೆಯನ್ನು ಸಾರ್ವಜನಿಕ ವೀಕ್ಷಣೆಗೆ ತೆರೆದಿಡಿ / ಓಪನ್ ಟು ಪಬ್ಲಿಕ್ ಇರಿಸಿ). ನಂತರ ಉತ್ತಮ ಪ್ರಜಾಕೀಯ ಪಕ್ಷದ ವೆಬ್ಸೈಟ್ ಗೆ ಲಾಗಿನ್ ಆಗಿ ತಮ್ಮ ಫೇಸ್ಬುಕ್ ಖಾತೆಯನ್ನು (ಸಾರ್ವಜನಿಕ ವೀಕ್ಷಣೆಗೆ ತೆರೆದಿಟ್ಟ ಫೇಸ್ಬುಕ್/ ಓಪನ್) ಲಿಂಕ್ ಮಾಡಿಕೊಂಡು ಚುನಾವಣೆಗಳಿಗೆ ಅಭ್ಯರ್ಥಿ ಆಕಾಂಕ್ಷಿಯಾಗಿ ಅರ್ಜಿಯನ್ನು ಸಲ್ಲಿಸಬೇಕು.

ಕೆಳಗಿನ ಸೂಚನೆಗಳನ್ನು ಸರಿಯಾಗಿ ಗಮನಿಸಿ:-

  1. ಉತ್ತಮ ಪ್ರಜಾಕೀಯ ಪಕ್ಷದಿಂದ ವಿವಿಧ ಚುನಾವಣೆಗಳಲ್ಲಿ ಅಭ್ಯರ್ಥಿಯಾಗಲು ಬಯಸುವ ಆಕಾಂಕ್ಷಿಗಳು ಚುನಾವಣೆಗಳ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಸ್ವಯಂ ತಿಳಿದುಕೊಂಡಿರಬೇಕು
  2. ಪ್ರಜಾಕೀಯದ ಸಿದ್ದಂತಗಳನ್ನು ಸಂಪೂರ್ಣವಾಗಿ ತಿಳಿದುಕೊಂಡಿರಬೇಕು ಹಾಗು ಬದ್ಧವಾಗಿರಬೇಕು
  3. ಉತ್ತಮ ಪ್ರಜಾಕೀಯ ಪಕ್ಷದ ಎಲ್ಲಾ ನಿಯಮಾವಳಿಗಳು ಹಾಗು ಮಾನದಂಡಗಳಿಗೆ ಬದ್ಧರಾಗಿರಬೇಕು
  4. ಒಬ್ಬರಿಗೆ ಒಂದು ಚುನಾವಣಾ ಅರ್ಜಿಯನ್ನು ಸಲ್ಲಿಸಲು ಅವಕಾಶವಿದ್ದು, ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಅಂತಹ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ
  5. ಚುನಾವಣಾ ಅರ್ಜಿಯಲ್ಲಿ ನೀಡಲಾಗಿರುವ ಎಲ್ಲ ಮಾಹಿತಿಗಳು ಸಮರ್ಪಕವಾಗಿರಬೇಕು ಹಾಗು ಎಲ್ಲ ದಾಖಲೆಗಳು ಸರಿಯಾಗಿ - ಸ್ಪಷ್ಟವಾಗಿರಬೇಕು
  6. ಚುನಾವಣೆಗೆ ಸಂಭಂದಿಸಿದಂತೆ ಯಾವುದೇ ಅಗತ್ಯವಾದ ಚುನಾವಣಾ ಸಂಭಂದಿಸಿದ ವೆಚ್ಚಗಳನ್ನು ಸ್ವಯಂ ಭರಿಸಬೇಕು
  7. ಮತದಾರರ ಶಿಫಾರಸ್ಸುಪತ್ರದೊಂದಿಗೆ ಮತದಾರರ ಸಹಿ-ಫೋನ್ ನಂಬರ್ ಕಡ್ಡಾಯವಾಗಿ ಸಂಗ್ರಹಿಸಿಕೊಂಡಿರಬೇಕು (ಸಹಿ ಸಂಗ್ರಹಣೆಯ ಫೋಟೋ ಸಹ ಅರ್ಜಿ ಸಲ್ಲಿಸುವಾಗ ಅಪ್ಲೋಡ್ ಮಾಡಬೇಕು)
  8. ಪ್ರಜಾಕೀಯ ಸಿದ್ದಂತಾದ ವಿರುದ್ಧವಾಗಿ ನಡೆದುಕೊಳ್ಳುವವರ ಹಾಗು ಉತ್ತಮ ಪ್ರಜಾಕೀಯ ಪಕ್ಷ ಬಾಹಿರ ಯಾವುದೇ ಚಟುವಟಿಕೆಗಳಲ್ಲಿ ಆಕಾಂಕ್ಷಿಯು ತೊಡಗಿಕೊಂಡಿರುವುದು ಕಂಡು ಬಂದಲ್ಲಿ ಅಂತಹ ಆಕಾಂಕ್ಷಿಗಳ ಅರ್ಜಿಗಳನ್ನು ಮಾನ್ಯ ಮಾಡುವುದಿಲ್ಲ ಅಥವಾ ತಿರಸ್ಕರಿಸಲಾಗುವುದು

ಸೂಚನೆ: ಒಬ್ಬ ವ್ಯಕ್ತಿಗೆ ಒಂದು ಚುನಾವಣಾ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.. ಹಾಗಾಗಿ ಎಲ್ಲ ವಿವರಗಳನ್ನು ಸರಿಯಾಗಿ ಓದಿ ಸ್ಪಷ್ಟವಾದ ಮಾಹಿತಿಗಳೊಂದಿಗೆ ಸೂಕ್ತ ಕ್ರಮದಲ್ಲಿ ತಮ್ಮ ಅರ್ಜಿಯನ್ನು ಸಲ್ಲಿಸಿರಿ.

ಅಭ್ಯರ್ಥಿ ಅರ್ಜಿ ಇಲ್ಲಿ ಸಲ್ಲಿಸಿ

ಲೋಕಸಭಾ ಚುನಾವಣೆಯ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ತಮ್ಮ ಕ್ಷೇತ್ರದಲ್ಲಿನ ಸ್ಥಳೀಯ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಅಥವಾ ಮುಖ್ಯ ಚುನಾವಣಾಧಿಕಾರಿ ಕರ್ನಾಟಕ ವೆಬ್ಸೈಟ್ ಗೆ ಭೇಟಿ ನೀಡಿರಿ (ವೆಬ್ಸೈಟ್ ಲಿಂಕ್: https://ceo.karnataka.gov.in/)